ಕನ್ನಡದಲ್ಲಿ ಕ್ರಿಯೇಟಿವ್ ಪಬ್ಲಿಷಿಂಗ್‌ ಸೇವೆಯನ್ನು ವಿಸ್ತರಿಸುವ ಪ್ರಯತ್ನವಾಗಿ ‘ಅಲೆ ಕ್ರಿಯೇಟಿವ್ಸ್‌’ ರೂಪುಗೊಂಡಿದೆ. ಕ್ರಿಯೇಟಿವ್ ಪಬ್ಲಿಷಿಂಗ್‌ ಸೇವೆಯನ್ನು ಹೆಚ್ಚೆಚ್ಚು ಜನರಿಗೆ ತಲುಪಿಸುವುದು ‘ಅಲೆ ಕ್ರಿಯೇಟಿವ್ಸ್‌’ನ ಉದ್ದೇಶ. ವೃತ್ತಿಪರ ಸೇವೆಯನ್ನು ಒದಗಿಸುವ ಗುರಿಯೊಂದಿಗೆ ಆರಂಭಗೊಂಡಿರುವ ‘ಅಲೆ ಕ್ರಿಯೇಟಿವ್ಸ್’ ಭಾರತ ಸರ್ಕಾರದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (MSME) ಸಚಿವಾಲಯದ ಅಡಿಯಲ್ಲಿ ನೋಂದಣಿಯಾಗಿರುವ ಪಬ್ಲಿಷಿಂಗ್ ಎಂಟರ್‌ಪ್ರೈಸ್. ‘ಅಲೆ ಕ್ರಿಯೇಟಿವ್ಸ್’ ದೆಹಲಿಯ The Federation of Indian Publishers ಸಂಸ್ಥೆಯ ಅಫ್ಲಿಯೇಟೆಡ್ ಮೆಂಬರ್‌ಶಿಪ್‌ ಅನ್ನೂ ಪಡೆದಿದೆ.

ಪ್ರೂಫ್‌ ರೀಡಿಂಗ್, ಟ್ರಾನ್ಸ್‌ಲೇಷನ್, ಟ್ರಾನ್ಸ್‌ಕ್ರೈಬ್, ಅಡ್ವಟೋರಿಯಲ್ ರೈಟಿಂಗ್, ರೀರೈಟಿಂಗ್, ಕ್ರಿಯೇಟಿವ್ ರೈಟಿಂಗ್, ಲೋಗೋ ಡಿಸೈನ್, ಪೋಸ್ಟರ್ ಡಿಸೈನ್, ಸರ್ಟಿಫಿಕೇಟ್ ಡಿಸೈನ್, ಬ್ರೋಷರ್ ಡಿಸೈನ್, ವೆಬ್‌ಸೈಟ್ / ಸೋಷಿಯಲ್ ಮೀಡಿಯಾ ಹ್ಯಾಂಡ್ಲಿಂಗ್ ಸೇರಿದಂತೆ ಎಲ್ಲಾ ಬಗೆಯ ಕ್ರಿಯೇಟಿವ್ ಪಬ್ಲಿಷಿಂಗ್ ಸೇವೆಗಳೂ ಇಲ್ಲಿ ಲಭ್ಯ.

ಪುಸ್ತಕ ಪ್ರಕಟಣೆಗೆ ಪ್ರಯತ್ನಿಸಿ ಸುಸ್ತಾಗಿದ್ದೀರಾ? ಪ್ರಕಾಶಕರ ದಿವ್ಯ ಮೌನದಿಂದ ಬೇಸತ್ತಿದ್ದೀರಾ? ನೀವೇ ಪುಸ್ತಕ ಪ್ರಕಟಿಸಲು ಮುಂದಾಗಿ ಮುದ್ರಿಸಿದ ಪುಸ್ತಕಗಳೆಲ್ಲಾ ನಿಮ್ಮಲ್ಲೇ ಉಳಿದು ಕೈಸುಟ್ಟುಕೊಂಡಿದ್ದೀರಾ? ಗುಣಮಟ್ಟದ ಪ್ರಕಟಣಾ ಸೇವೆ ಸಿಗದೇ ಕಂಗಾಲಾಗಿದ್ದೀರಾ? ಇನ್ನು ಪ್ರಕಟಣೆಯ ಚಿಂತೆ ಬಿಡಿ, ನೀವು ಕೇವಲ ಬರೆಯುವ ಬಗ್ಗೆಯಷ್ಟೇ ಗಮನ ಹರಿಸಿ, ಪುಸ್ತಕ ನಾವು ಪ್ರಕಟಿಸುತ್ತೇವೆ.


ಕನ್ನಡ ಪುಸ್ತಕ ಪ್ರಕಟಣೆಯಲ್ಲಿ ತೀರಾ ಅಪರೂಪವಾಗಿರುವ ಡೆವಲಪ್ಮೆಂಟಲ್‌ ಎಡಿಟಿಂಗ್, ರೀರೈಟಿಂಗ್ ಪ್ರಕ್ರಿಯೆಯೊಂದಿಗೆ ನಿಮ್ಮ ಪುಸ್ತಕ ಉತ್ತಮ ಗುಣಮಟ್ಟದೊಂದಿಗೆ ಪ್ರಕಟಗೊಳ್ಳಲಿದೆ. ಅಲ್ಲದೆ ‘ಅಲೆ ಕ್ರಿಯೇಟಿವ್ಸ್‌’ನ ಎಲ್ಲಾ ಪುಸ್ತಕಗಳು ISBNನೊಂದಿಗೇ ಪ್ರಕಟವಾಗಲಿವೆ. ನಿಮ್ಮ ಪುಸ್ತಕ ಪ್ರಕಟಿಸಲು ನಮಗೆ ಒಂದು ಮೇಲ್ ಬರೆಯಿರಿ ಸಾಕು.

ಇಮೇಲ್ ಐಡಿ: alecreatives.books@gmail.com

FacebookInstagramTwitterLinkedInYouTube