ಯಾವುದೀ ‘ಅಲೆ’?
ಕನ್ನಡದಲ್ಲಿ ಕ್ರಿಯೇಟಿವ್ ಪಬ್ಲಿಷಿಂಗ್ ಸೇವೆಯನ್ನು ವಿಸ್ತರಿಸುವ ಪ್ರಯತ್ನವಾಗಿ ‘ಅಲೆ ಕ್ರಿಯೇಟಿವ್ಸ್’ ರೂಪುಗೊಂಡಿದೆ. ಕ್ರಿಯೇಟಿವ್ ಪಬ್ಲಿಷಿಂಗ್ ಸೇವೆಯನ್ನು ಹೆಚ್ಚೆಚ್ಚು ಜನರಿಗೆ ತಲುಪಿಸುವುದು ‘ಅಲೆ ಕ್ರಿಯೇಟಿವ್ಸ್’ನ ಉದ್ದೇಶ. ವೃತ್ತಿಪರ ಸೇವೆಯನ್ನು ಒದಗಿಸುವ ಗುರಿಯೊಂದಿಗೆ ಆರಂಭಗೊಂಡಿರುವ ‘ಅಲೆ ಕ್ರಿಯೇಟಿವ್ಸ್’ ಭಾರತ ಸರ್ಕಾರದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (MSME) ಸಚಿವಾಲಯದ ಅಡಿಯಲ್ಲಿ ನೋಂದಣಿಯಾಗಿದೆ. ‘ಅಲೆ ಕ್ರಿಯೇಟಿವ್ಸ್’ ದೆಹಲಿಯ The Federation of Indian Publishers ಸಂಸ್ಥೆಯ ಅಫ್ಲಿಯೇಟೆಡ್ ಮೆಂಬರ್‌ಶಿಪ್ ಅನ್ನೂ ಪಡೆದಿದೆ.
‘ಪ್ರಜಾವಾಣಿ’ ಪತ್ರಿಕೆಯಲ್ಲಿ ಹಲವು ವರ್ಷಗಳ ಕಾಲ ಪತ್ರಕರ್ತೆಯಾಗಿ ಕೆಲಸ ಮಾಡಿರುವ ಅನುಪಮಾ ಫಾಸಿ ಈ ‘ಅಲೆ’ಯ ರೂವಾರಿ. ಮೈಸೂರು ವಿಶ್ವವಿದ್ಯಾಲಯದಿಂದ ‘ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮ’ದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅನುಪಮಾ ‘Times Internet’ ಮತ್ತು ಡಿಜಿಟಲ್ ಮಾರ್ಕೆಟಿಂಗ್ & ಬ್ರಾಂಡಿಂಗ್ ಕಂಪೆನಿ ‘inbounderz’ನಲ್ಲಿ ಕ್ರಿಯೇಟಿವ್ ಪಬ್ಲಿಷಿಂಗ್‌ನ ಅನುಭವ ಹೊಂದಿದ್ದಾರೆ. ಅನುಪಮಾ ಜತೆಗೆ ಹಲವು ಸಮಾನ ಮನಸ್ಕರು ಈ ‘ಅಲೆ’ಯೊಂದಿಗಿದ್ದಾರೆ. ನಮ್ಮ ಸೇವೆ ಪಡೆಯುವ ಮೂಲಕ ನೀವೂ ಈ ‘ಅಲೆ’ ಸೇರಬಹುದು.